Cancel Preloader

ದಿವ್ಯ ದೀವಿಗೆ

ತಾಮಸದಿ ಬೆಂದಿರುವ ನರನರುದ್ಧರಿಸುಜ್ಞಾನಬಿತ್ತುವ ದಿವ್ಯತೇಜವೆಇಡಿಯೆಡೆ ಇರುಳನು ಇನ್ನಿಲ್ಲವಾಗಿಸುದೀಪಾವಳಿಯ ದೀವಿಗೆ ಬೆಳಕಲಿ ||ಪ|| ನಿಶೆಯಲಿ ಮುಳುಗಿಹ ಜಗದಂಗದಲಿತಾರೆ ತಿಂಗಳ ಕೋಮಲಕಾಂತಿಮಿಕ್ಕೆಡೆ ಹರಡಿದೆ ಅಸುಬಲದಾಗರರವಿಸೂಸುವ ತೀವ್ರಪ್ರಕಾಶಮನದಂಧಕಾರ ತೊಲಗಿಸುಬಾವಿಶ್ವಯೋಗಿಯ ಶುದ್ಧಜ್ಯೋತಿ ||೧|| ಸರ್ವರಲು ಶೂನ್ಯದಲು ಮಿನುಗಿಹುದುಅನಂತನೊಳಹು ದಾರಿತೋರುತಬೆಳಕು ಕತ್ತಲನು ಸಮ್ಮಿಶ್ರಗೊಳಿಸುವಅಗೋಚರನೆ ಇಗೋ ನಮನಮೊರೆಯುವೆ ಚೇತನವೆ ಸೊಡರನಚ್ಚುತವಿಶ್ವಪ್ರೀತಿಯ ನೀಡು ಅನಂತ ||೨|| ✍ ವಿಶ್ವನಾಥ ಸಿ. ಎಮ್.ಬಾಗಲಕೋಟೆRead More

ಶೀರ್ಷಿಕೆ

ನನ್ನ ಹೃದಯದ ಕವನಕೆನೀನು ಬರೆಯದೆ ಶೀರ್ಷಿಕೆಹಾಗೆ ಅಳಿಸಿ ಹೋದೆಯಾ ನನ್ನ ಮನದ ಮುಗಿಲಲಿನಿನ್ನ ಹೆಸರ ಬರೆಯದೆಹಾಗೆ ಹೊರಟು ನಿಂತೆಯಾ ಕಣ್ಣಹನಿಯು ಕರಗಿಸಿದೆನಿನ್ನ ಕಣ್ಣಕಾಡಿಗೆಪ್ರೀತಿಯ ಹೇಳದೆ ಯಾಕೆಇರುವೆ ನಿನ್ನ ಪಾಡಿಗೆ ಗೆಜ್ಜೆಯ ದನಿಯಾಗಿರುವೆನಿನ್ನ ಕಾಲಿಗೆಪ್ರೀತಿಯ ಹೇಳು ನಾನಿರುವೆನಿನ್ನ ಪಾಲಿಗೆ ನನ್ನ ಪ್ರೀತಿಯ ರಾಗಕೆಈಗ ನೀನೆ ವೇದಿಕೆಪ್ರೇಮರಾಗ ಹಾಡುತ ಬಾನೀ ನನ್ನ ಸಮೀಪಕೆ ಅನುಪಲ್ಲವಿ ನೀನಾಗುಈ ಜೀವಕೆನಾನಿರುವೆ ನಿನ್ನೊಂದಿಗೆಪ್ರತಿ ಜನ್ಮಕೆ ಜನಾರ್ಧನ್ ಎಂ ಎನ್, ಭಟ್ಕಳRead More

ಅಜರಾಮರ

ಸತ್ಯಕೆ ಕನ್ನಡಿ ಹಿಡಿದರೆಇವನದೆ ಪ್ರತಿರೂಪದೀನರ ಬಾಳನುಬೆಳಗಿದನಿವ ನಂದಾದೀಪ ಬೆಳಕೆರೆವ ಹಣತೆ ಸುತ್ತಲೂತುಂಬಿದೆ ಬಡಗತ್ತಲುದೀನತೆಯ ಚಿಂದಿಬಾಳ ಕಂಡುಈತ ಅರೆ ಬೆತ್ತಲು ಈ ನೆಲದ ಬಸಿರಲಿಚಿಲುಮೆ ಒಡೆದ ಒರತೆಬಡ ದಾಹ ನೀಗಿಸಿದಮಹದೊಲ್ಮೆಯಂತೆ ಸತ್ಯದ ಚರಕ ಹಿಡಿದುಅಹಿಂಸಾ ನೂಲನು ಎಳೆದುಕಾಯಕ ಯೋಗಿಧರ್ಮ ವ ಮೀರಿಅಜರಾಮರನಿವನು ಕಾವಿಯುಟ್ಟು ತಪಗೈದುಜಪಮಣಿ ಎಣಿಸಲಿಲ್ಲಕತ್ತಿ ಕೋವಿ ಗುಂಡು ಹಿಡಿದುವೀರನೆನಿಸಲಿಲ್ಲ ಬಡ ಬೆತ್ತಲ ಗುಂಡಿಗೆಯೂಕಣ್ಣ ಕುಕ್ಕಿತುಕರಗದ ವಿಷ ಪಿತೂರಿಗೆಉರುಳಿತು ಕಾಯಅಳಿಯದ ಆತ್ಮಪ್ರತಿ ಉಸಿರಲು ಬೆರೆತಿದೆ ಎಂದೆಂದಿಗೂ..Read More

ಹಣತೆ

ಮನೆಗೆ ಬೆಳಕನು ತುಂಬಿಬೆಳಗುತಿದೆ ಹಣತೆಗಳುಊರಿನ ತುಂಬ , ದೇಶದಲ್ಲೆಲ್ಲಲಕ್ಷ ಲಕ್ಷ ದೀಪಗಳು ……ಮನೆ , ಮನದಂಗಳವನ್ನುಗುಡಿಸಿ , ಸಾರಿಸಿರಂಗವಲ್ಲಿ ಇಟ್ಟುಸುತ್ತಲಿನ ಕತ್ತಲುದಾರಿ ತಪ್ಪಿಸದಿರಲು ಹೊಸ್ತಿಲಲ್ಲಿಹಣತೆಯ ದೀಪ ಹಚ್ಚಿಟ್ಟುಕಾಯುತಿರುವೆ ಹೂಚೆಲ್ಲಿ ನಿನಗಾಗಿನಮ್ಮೊಳಗಿನ ಅಂಧಃಕ್ಕಾರವನ್ನು ಕಿತ್ತುಮನದಂಗಳವ ಗುಡಿಸಿಕೊಳೆಯ ರಾಶಿಯ ತೊಳೆದುನಡೆಯೋಣ ಭವಿಷ್ಯದ ಪಥದಲ್ಲಿಹೊಸ ಆಸೆಗಳ ಗಿಡನೆಟ್ಟುಹೊಸ ಚೈತನ್ಯ ಸ್ಫೂರ್ತಿಯಿಂದಬೆಳಗು ಬೆಳಗು ಬಯಲು ತುಂಬಒಲವ ತರುವ ಹೃದಯ ತುಂಬಪ್ರಖರ ತರುವ ಬಿಂಬ ನೀನುಆದರೂ….. ,ಮನದಲೊಳಗೆ ಕತ್ತಲೇಕೆ …..?ಮರಳಿ ಬಾ ಜ್ಞಾನೇಶ್ವರದೀಪ ಬೆಳಗಿ ಮಬ್ಬನಳಿಸಿಜ್ಞಾನ ಜ್ಯೋತಿ ಮನದಲ್ಲಿರಿಸಿನಿನ್ನ ಹೆಜ್ಜೆಯ ಸದ್ದಿನಿಂದಲೇನನ್ನ ಹೃದಯದಲ್ಲಿಸಂತಸದ ಹಣತೆ […]Read More