Cancel Preloader

ಶೀರ್ಷಿಕೆ

ನನ್ನ ಹೃದಯದ ಕವನಕೆ
ನೀನು ಬರೆಯದೆ ಶೀರ್ಷಿಕೆ
ಹಾಗೆ ಅಳಿಸಿ ಹೋದೆಯಾ

ನನ್ನ ಮನದ ಮುಗಿಲಲಿ
ನಿನ್ನ ಹೆಸರ ಬರೆಯದೆ
ಹಾಗೆ ಹೊರಟು ನಿಂತೆಯಾ

ಕಣ್ಣಹನಿಯು ಕರಗಿಸಿದೆ
ನಿನ್ನ ಕಣ್ಣಕಾಡಿಗೆ
ಪ್ರೀತಿಯ ಹೇಳದೆ ಯಾಕೆ
ಇರುವೆ ನಿನ್ನ ಪಾಡಿಗೆ

ಗೆಜ್ಜೆಯ ದನಿಯಾಗಿರುವೆ
ನಿನ್ನ ಕಾಲಿಗೆ
ಪ್ರೀತಿಯ ಹೇಳು ನಾನಿರುವೆ
ನಿನ್ನ ಪಾಲಿಗೆ

ನನ್ನ ಪ್ರೀತಿಯ ರಾಗಕೆ
ಈಗ ನೀನೆ ವೇದಿಕೆ
ಪ್ರೇಮರಾಗ ಹಾಡುತ ಬಾ
ನೀ ನನ್ನ ಸಮೀಪಕೆ

ಅನುಪಲ್ಲವಿ ನೀನಾಗು
ಈ ಜೀವಕೆ
ನಾನಿರುವೆ ನಿನ್ನೊಂದಿಗೆ
ಪ್ರತಿ ಜನ್ಮಕೆ

ಜನಾರ್ಧನ್ ಎಂ ಎನ್, ಭಟ್ಕಳ