Cancel Preloader

“ಪ್ರೀತಿನಾ ಉಳಿಸಿ ಇಲ್ಲಾ ಮೆರೆಸಿ”

 ‘ಪರಸ್ಪರ ಪ್ರೀತಿ ಮಾಡುವ ಎರಡು ಜೀವಗಳು ಯಾವತ್ತು ದೂರ ಆಗಬಾರದು. ಹೃದಯಕ್ಕೆ ಪ್ರೀತಿ ಆರಿಸಿಕೊಳ್ಳುವ ಹಕ್ಕಿದೆ. ಆದ್ರೆ ಮೋಸ ಮಾಡಬಾರದು. ಒಬ್ಬರ ಮೇಲೆ ಒಬ್ಬರು ನಂಬಿಕೆಯನ್ನಿಡಿ. ಆ ನಂಬಿಕೆಯೇ  ಕೂನೆಯ ತನಕ ಕಾಯ್ದುಕೊಂಡು ಹೋಗಿ.ಮೋಸ ಮಾಡದೆ , ವಂಚನೆ ಮಾಡದೆ, ಯಾರನ್ನು ಬಳಿಸಿಕೂಳ್ಳದೇ ಸಂಬಂಧಗಳಿಗೆ ಬೆಲೆ ಕೊಡಿ. ನಂಬಿಕೆ ಅನ್ನೋದು ಪತ್ರದ ಬಿಂದು ವಿದ್ದಂತೆ ಒಮ್ಮೆ ಜಾರಿದ್ರೆ ಮುಗಿತು, ಪ್ರೀತಿಯನ್ನ ಪ್ರೀತ್ಸೋರನ್ನ ಕೇಳಿಕೊಂಡು ಬಿಡುತ್ತವೆ.
          ಪ್ರೀತ್ಸೂರು ಎಷ್ಟೇ ದೂರಾಗಿ ಇದ್ರೂ ಪರಸ್ಪರ ನಂಬಿಕೆ, ಗೌರವ ಇರಬೇಕು.ಆವಾಗ ಮಾತ್ರ ಅದಕ್ಕೊಂದು ಬೆಲೆ ಇರುತ್ತದೆ.ಅಂತಹ ಪ್ರೀತಿ ಯಾವತ್ತಿಗೂ ಮುರಿಯುವದಿಲ್ಲ.ಪ್ರೀತ್ಸೋರ ಮನಸನ್ನ್ ಚೆನ್ನಾಗಿ ತಿಳಿದುಕೊಳ್ಳಬೇಕು. ಅವಸರದೇ  ತಾಳ್ಮೆಯಿಂದ ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶ ಮಾಡಿಕೊಡಬೇಕು.ಅಂದಾಗ ಬದುಕು ಸುಂದರಮಯವಾಗಿ ಕಾಣುತ್ತದೆ.
   ನಿಮ್ಮ ಪ್ರೀತಿ, ಪ್ರೇಮಾ ಮುರಿದು ಬಿಳುವ ಸಮಯ ಬಂದರೇ ತಡೆಯಲು ಪ್ರಯತ್ನಿಸಿ, ಯಾರನ್ನು ನೋವಿಸಬೇಡಿ ಏನೋ ಆಗಿ ನಿಮ್ಮ ಕೈ ತಪ್ಪಿ ಬೇರೆಯವರ ಜೊತೆ ನಿಮ್ಮ ಮದುವೆಯಾಯಿತು ಅಂದ್ರೆ ಆಗ ನೀವು ಕಳಕೂಂಡ ಪ್ರೀತಿನಾ ಮರಿಲಿಕ್ಕೆ ಪ್ರಯತ್ನ ಪಡಿ ಹಾಗೆ ಮರಿಸುವುದಕ್ಕೆ ಸಹಾಯ ಮಾಡಿ 
ಏಕೆಂದರೆ ನೀವೂ ಕೋಟ್ಟ  ಮುಗ್ಧ ಪ್ರೀತಿ ಕೆಲವರಿಗೆ ಮರಿಯೋಕೆ ಆಗಲ್ಲ .ಆ‌ ಜೀವ ನಿಮ್ಮ ಮೇಲೆ ಪ್ರಾಣ ಇಟ್ಟುಕೊಂಡಿರುತ್ತದೆ.ಸಾದ್ಯವಾದ್ರೆ ಅವರಿಗೆ ಸ್ಪೂರ್ತಿಯಾಗಿ , ಕ್ರಮೇಣವಾಗಿ ನಿಮ್ಮ ಭ್ರಮೆಯಿಂದ ಹೋರಬರಲು, ಪ್ರೀತಿಯ ಸ್ಥಾನದಿಂದ ಸ್ನೆಹಕ್ಕೂ, ಇನ್ನಿತರ ಸಂಬಂಧಕ್ಕೆ ತರೋ ಪ್ರಯತ್ನಾ ಮಾಡಿ.ಆಗ ಅವ್ರ ಜೀವನಾನೂ ಹಾಳು ಆಗೂದಿಲ್ಲ.  ಒಂದ ಕಾಲದಲ್ಲಿ ನೀವು ಪ್ರೀತಿಸಿದ  ಹೃದಯ ಸಾಯಿಲಿಕ್ಕೆ ನೀವೇ ಕಾರಣ ಆಗಬೇಡಿ. 
           ಅತಿಯಾಗಿ ಪ್ರೀತ್ಸೋರು ನಮ್ಮ ಹೃದಯದಲ್ಲಿ ಅಚ್ಚಾಗಿ ಉಳಿದುಬಿಡುತ್ತಾರೆ. ಆದರೆ ಆ ಮನೋಲೋಕದ ಭ್ರಮೆಯಿಂದ ಹೊರ ಬರಲು ಸಾಧ್ಯವೇ ಇಲ್ಲ. ಅಂತ ತಿಳಿದುಕೊಂಡು ಬಿಟ್ಟಿರುತ್ತೇವೆ. ಏಕೆಂದರೆ ಆ ಲೋಕವೇ ಹಾಗೆ, ಇಲ್ಲಿ ಬಿಟ್ಟು ಹೋದವರ‌ಕ್ಕಿಂತಾ ಉಳಿದವರೇ ಹೆಚ್ಚು ನೋವು ಅನುಭವಿಸುವುದು. ಈ ಮನುಷ್ಯ ನೋಡಿ ಎಲ್ಲಿ ಅನುಕೂಲ ಇರುತ್ತೆ, ಅಲ್ಲಿ ವಾಸ್ತವ್ಯ ಹೂಡಿ ಬಿಡ್ತಾನೆ.   
           ನಿಜವಾದ ಪ್ರೀತಿ ಪ್ರೇಮಕ್ಕೆ ಬೆಲೆ ಕೊಡದೆ ಜೀವನದಲ್ಲಿ  ಇನ್ಯಾರನ್ನೋ ಕಟ್ಕೊಂಡು ನಡೆದು ಬಿಡ್ತಾರೆ.ಮನುಷ್ಯ ಎಷ್ಟು ಸ್ವಾರ್ಥಿ ನೋಡಿ ತಮ್ಮ ಜೀವನ ಚೆನ್ನಾಗಿರಬೇಕೆಂದರೆ ಬೇರೆಯವರ ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡು ಬಿಡುತ್ತಾರೆ.ಜೀವನದಲ್ಲಿ  ಯಾವ ವಿಷಯಕಾದ್ರೂ ಬಳಸಿ ಕೊಂಡಿದ್ದರೆ. ಮೋಸ ಹೋಗಿದ್ರೆ,  ಛಲಾ ತೊಟ್ಟು ಮುಂದೆ ಬರಬಹುದು, ಆದರೆ ಈ ಸೆಂಟಿಮೆಂಟಲ್ ಪ್ರೀತಿ,ಪ್ರೇಮ ಎಂಬ ವಿಷಯದಲ್ಲಿ  ಒಮ್ಮೆ ಸೋತು ಬಿಟ್ಟರೆ,ಆ ಮನುಷ್ಯ ಮಾನಸಿಕ ವ್ಯಥೆಗೆ ಒಳಗಾಗುತ್ತಾನೆ.ಆ ನೋವನ್ನು ಹೇಳೋಕೆ ಆದರೆ ಒಳಗೊಳಗೆ ಕೊರಗುತ್ತಾ ,ಕೊರಗುತ್ತಾ ಖಿನ್ನತೆಗೆ ಒಳಗಾಗಿ ಬಿಡ್ತಾನೆ.
          ಇಂಥ ಮನಸ್ಥಿತಿಗಳಿಗೆ ಧೈರ್ಯ ತುಂಬುರಾದ್ರೂ ಯಾರೂ ?ಆದರೆ ನೋವುಗಳಿಗೆ ಸ್ಪಂದನೆ ಮಾಡಿ ಪರಿಹಾರ ಕೊಡೋರಾದ್ರೂ ಯಾರು? ಅವರನ್ನು ಮೊದಲಿನ ತರಹ ಮಾಡಲಿಕ್ಕೆ ಸಾಧ್ಯಾನಾ, ಈ ಎಲ್ಲ ಪ್ರಶ್ನೆಗಳು ಪ್ರಶ್ನೆಯಾಗಿ ಉಳಿದು ಬಿಡುತ್ತೇವೆ.
       ಈ ಬದುಕಿನಲ್ಲಿ ಪ್ರೀತಿ ಪ್ರೇಮ ಎಂಬ ವಿಷಯದ ಬಗ್ಗೆ ಯಾರಲ್ಲಾದರೂ ಮಾತಾಡಿದ್ರೆ,ಮಾಡಲಿಕ್ಕೆ ಕೆಲಸ ಇಲ್ಲ ಏನು ಎಂದು ಗದರಿಸಿಬಿಡ್ತಾರೆ.
ಅವರಿಗೆ ಆದ ಅನುಭವವೇ ಹಾಗೇ ಮಾಡಲಿಕ್ಕೆ ಪ್ರೇರಣಿ ಮಾಡುತ್ತೆ.ಏಕೆಂದರೆ ನಾವು ಹಾಳಾದ್ ರೀತಿ ನೀವು ಹಾಳು ಆಗಬೇಡಿ, ಎನ್ನೂ  ಉದ್ದೇಶದಿಂದ.
     ಎಲ್ಲೋ ದೂರದಿಂದ ಬರೋ ಫೋನ್ ಕಾಲ್ ಅವರನ್ನು ಇನೋಸೆಂಟ್ ಆಗಿ ಸೆಂಟಿಮೆಂಟಲ್ ಫೂಲ್ ಆಗಿ ಮಾಡಿ ಬಿಟ್ಟಿರುತ್ತೆ ಅವರನ್ನ, ಅವರ ಆ  ಮುಗ್ಧ ಮಾತುಗಳಿಗೆ ಬಲಿಯಾಗಿ ,ಅವರಿಗೆ ನಮ್ಮ ಸಡಿಲಿಕೆಯನ್ನು ಕೊಟ್ಟು ಬಿಡುತ್ತೇವೆ. ಇದು ನಾವು ಮಾಡುವ ಮೊದಲನೇ ತಪ್ಪು. ಏಕೆಂದರೆ ಯಾವ ಸಂಬಂಧ ಅತಿ ಬೇಗ ಸಲಿಗೆಯನ್ನ ಪಡಿದಿರುತ್ತದೋ , ಅಷ್ಟೇ ಬೇಗ ಆ ಸಂಬಂಧ ಸಮಾಧಿಯಾಗಿ ಬಿಡುತ್ತದೆ. ಯಾರನ್ನ ಮನಸ್ಸಿಗೆ ತುಂಬಾ ಹಚ್ಚಿಕೊಂಡು ಬಿಡುತ್ತೇವೆ. ಅವರು ನಮ್ಮನ್ನು ಬಿಟ್ಟರು ನಾವು ಅವರನ್ನ ಬಿಡದೇ ಇರುವ ರೀತಿ ಆ ಮಾತುಗಳು ಮೋಡಿ ಮಾಡಿ ಬಿಟ್ಟರುತ್ತವೆ.           

ಮುಂದುವರೆಯುವುದು.     
‌                   

ಕಿರಣ್ ಕಮ್ಮಾರ
                             ಕರ್ನಾಟಕ ವಿಶ್ವವಿದ್ಯಾಲಯ. ಧಾರವಾಡ.  
                                      7829324656  

beladingalabutti