Cancel Preloader

ದಿವ್ಯ ದೀವಿಗೆ

ತಾಮಸದಿ ಬೆಂದಿರುವ ನರನರುದ್ಧರಿಸು
ಜ್ಞಾನಬಿತ್ತುವ ದಿವ್ಯತೇಜವೆ
ಇಡಿಯೆಡೆ ಇರುಳನು ಇನ್ನಿಲ್ಲವಾಗಿಸು
ದೀಪಾವಳಿಯ ದೀವಿಗೆ ಬೆಳಕಲಿ ||ಪ||

ನಿಶೆಯಲಿ ಮುಳುಗಿಹ ಜಗದಂಗದಲಿ
ತಾರೆ ತಿಂಗಳ ಕೋಮಲಕಾಂತಿ
ಮಿಕ್ಕೆಡೆ ಹರಡಿದೆ ಅಸುಬಲದಾಗರ
ರವಿಸೂಸುವ ತೀವ್ರಪ್ರಕಾಶ
ಮನದಂಧಕಾರ ತೊಲಗಿಸುಬಾ
ವಿಶ್ವಯೋಗಿಯ ಶುದ್ಧಜ್ಯೋತಿ ||೧||

ಸರ್ವರಲು ಶೂನ್ಯದಲು ಮಿನುಗಿಹುದು
ಅನಂತನೊಳಹು ದಾರಿತೋರುತ
ಬೆಳಕು ಕತ್ತಲನು ಸಮ್ಮಿಶ್ರಗೊಳಿಸುವ
ಅಗೋಚರನೆ ಇಗೋ ನಮನ
ಮೊರೆಯುವೆ ಚೇತನವೆ ಸೊಡರನಚ್ಚುತ
ವಿಶ್ವಪ್ರೀತಿಯ ನೀಡು ಅನಂತ ||೨||

ವಿಶ್ವನಾಥ ಸಿ. ಎಮ್.
ಬಾಗಲಕೋಟೆ